Saturday, 7 March 2026

ಕನ್ನಡ ಜಾನಪದ ಪರಿಷತ್ ಕಿರುಪರಿಚಯ



ಕನ್ನಡ ಜಾನಪದ ಪರಿಷತ್ ಪರಿಚಯ

ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ ಸ್ಥಾಪಿತವಾದ ಸಾಂಸ್ಕೃತಿಕ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಇಂದು ಪರಿಷತ್ತಿಗೆ 31 ಜಿಲ್ಲಾ ಘಟಕಗಳು, 218 ತಾಲೂಕು ಘಟಕಗಳು, 323 ಹೋಬಳಿ ಘಟಕಗಳು ಹಾಗೂ 1765 ಗ್ರಾಮ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ 3 ಗಡಿನಾಡು ಘಟಕಗಳು ಮತ್ತು 3 ಹೊರನಾಡು ಘಟಕಗಳು, ಬೆಂಗಳೂರಿನ ಮಹಾನಗರದಲ್ಲಿ 15 ವಿಧಾನಸಭಾ ಕ್ಷೇತ್ರ ಘಟಕಗಳು, 7 ಜಿಲ್ಲೆಗಳಲ್ಲಿ ಮಹಿಳಾ ಘಟಕಗಳು ಹಾಗೂ 31 ಜಿಲ್ಲೆಗಳಲ್ಲಿ ಜಾನಪದ ಯುವ ಬ್ರಿಗೇಡ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ಈ ಪರಿಷತ್ತು ಮೌಖಿಕ ಪರಂಪರೆ ಮತ್ತು ಪ್ರದರ್ಶನ ಕಲೆಗಳನ್ನು ಹಳೆಯ ತಲೆಮಾರಿಯಿಂದ ಹೊಸ ತಲೆಮಾರಿಗೆ ದಾಖಲಿಕೆ ಮತ್ತು ತರಬೇತಿ ಮೂಲಕ ಪರಿಚಯಿಸುವ ಉದ್ದೇಶದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. “ವಿಕಾಸಕ್ಕಾಗಿ ಜಾನಪದ” ಎಂಬ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.

ಸರ್ಕಾರದ ಯಾವುದೇ ಅನುದಾನವಿಲ್ಲದೆ, ಜನರ ಸಹಕಾರದಿಂದಲೇ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಕಳೆದ ಹತ್ತು ವರ್ಷಗಳಲ್ಲಿ 12,568 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಹಿರಿಯ ಮೂಲ ಜನಪದ ಕಲಾವಿದರನ್ನು ಗುರುತಿಸಿ “ಜಾನಪದ ಪ್ರಪಂಚ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಯುವಜನರನ್ನು ಉತ್ತೇಜಿಸಲು “ಯುವ ಜಾನಪದ ಪ್ರಪಂಚ ಪ್ರಶಸ್ತಿ” ನೀಡುವ ಮೂಲಕ ಸಾಧನೆಗೈದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಪರಿಷತ್ತು ಯಶಸ್ವಿಯಾಗಿ ನಡೆಸಿದೆ. ಅವುಗಳಲ್ಲಿ ಗೋಕರ್ಣ ಹಾಗೂ ಮರವಂತೆಯಲ್ಲಿ ರಾಜ್ಯಮಟ್ಟದ ಜಲ ಜಾನಪದೋತ್ಸವ, ಶಿವಮೊಗ್ಗದಲ್ಲಿ ರಾಜ್ಯ ಜೋಗಿ ಸಮ್ಮೇಳನ (ಶ್ರೀ ನಾಡಿಗದ ಅವರ ಅಧ್ಯಕ್ಷತೆಯಲ್ಲಿ), ಬೆಂಗಳೂರಿನ ಸಿಂಗಾಪುರ ಲೇಔಟ್‌ನಲ್ಲಿ ರಾಜ್ಯ ಗೊರವರ ಸಮ್ಮೇಳನ, ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರಮಟ್ಟದ ಗಾಳಿಪಟ ಸ್ಪರ್ಧೆ ಮತ್ತು ಉತ್ಸವ, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾಜ್ಯ ಬುಡಕಟ್ಟು ಉತ್ಸವ, ಬಬಲೇಶ್ವರದಲ್ಲಿ ವಿಭಾಗ ಮಟ್ಟದ ಜಾನಪದ ಸಮ್ಮೇಳನ, ರಾಯಚೂರಿನಲ್ಲಿ ರಾಜ್ಯ ಮಹಿಳಾ ಜಾನಪದ ಸಮ್ಮೇಳನ, ಕಲ್ಬುರ್ಗಿಯಲ್ಲಿ ಒಡಪು ಸ್ಪರ್ಧೆ, ತರೀಕೆರೆಯಲ್ಲಿ ರಾಜ್ಯಮಟ್ಟದ ಒಗಟು ಸ್ಪರ್ಧೆ, ಹಾಸನದಲ್ಲಿ ರಾಜ್ಯಮಟ್ಟದ ಗಾದೆ ಸ್ಪರ್ಧೆ, ರಾಮನಗರದ ಕನಕಪುರದಲ್ಲಿ ಹೆಣ್ಣುಮಕ್ಕಳ ಜಡೆಯುವ ಸ್ಪರ್ಧೆ, ದಾವಣಗೆರೆಯಲ್ಲಿ ರಾಜ್ಯಮಟ್ಟದ ಜನಪದ ಗೀತಾಗಾಯನ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ 10 ಜಾನಪದ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ.ಇದು ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಿದೆ.


 ದಶಮಾನೋತ್ಸವದ ಅಂಗವಾಗಿ 10 ಜಿಲ್ಲೆಗಳಲ್ಲಿ ಜಾನಪದ ನೃತ್ಯ ಹಾಗೂ ಗೀತೆ ಸ್ಪರ್ಧೆಗಳನ್ನು, ಕನ್ನಡ ಜಾನಪದ ಪರಿಷತ್ ಯುವ ಘಟಕದ ವತಿಯಿಂದ ರಾಜ್ಯ ಯುವ ಜಾನಪದ ಸಮ್ಮೇಳನವನ್ನು, ಹುಬ್ಬಳ್ಳಿಯಲ್ಲಿ ಹಾಗೂ ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಹಿಳಾ ಜಾನಪದ ಸಮ್ಮೇಳನಗಳನ್ನು ಆಯೋಜಿಸಲು ಯೋಜಿಸಲಾಗುವುದು.


ಕನ್ನಡ ಜಾನಪದ ಪರಿಷತ್ – ದಶಮಾನೋತ್ಸವ ಘೋಷಣೆ 🌾


ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳು ಹಾಗೂ ಗೌರವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.


🏆 ರಾಜ್ಯ ಮಟ್ಟದ ಗೌರವ ಪ್ರಶಸ್ತಿಗಳು


✨ ದಶಮಾನೋತ್ಸವ ರಾಜ್ಯ ಗೌರವ ಪ್ರಶಸ್ತಿ – 10 ವಿವಿಧ ಕ್ಷೇತ್ರಗಳ ಸಾಧಕರಿಗೆ

✨ ದಶಮಾನೋತ್ಸವ ರಾಜ್ಯ ಯುವ ಗೌರವ ಪ್ರಶಸ್ತಿ – 10 ಯುವ ಸಾಧಕರಿಗೆ

✨ ದಶಮಾನೋತ್ಸವ ರಾಜ್ಯ ಮಹಿಳಾ ಗೌರವ ಪ್ರಶಸ್ತಿ – 10 ಮಹಿಳಾ ಸಾಧಕರಿಗೆ


👥 ರಾಜ್ಯ ಸಲಹಾ ಸಮಿತಿ


ದಶಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದಲ್ಲಿ 10 ಜನ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.


🎭 ದಶಮಾನೋತ್ಸವ ವಿಶೇಷ ಸಮ್ಮೇಳನಗಳು

ಮುಂದಿನ 5 ವರ್ಷಗಳೊಳಗೆ ರಾಜ್ಯ ಮಟ್ಟದಲ್ಲಿ 10 ಜಾನಪದ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.


1️⃣ ರಾಜ್ಯ ವಕೀಲರ ಜಾನಪದ ಸಮ್ಮೇಳನ

2️⃣ ರಾಜ್ಯ ಮಹಿಳಾ ಜಾನಪದ ಸಮ್ಮೇಳನ

3️⃣ ರಾಜ್ಯ ಮಕ್ಕಳ ಜಾನಪದ ಸಮ್ಮೇಳನ

4️⃣ ರಾಜ್ಯ ಪೊಲೀಸ್ ಜಾನಪದ ಸಮ್ಮೇಳನ

5️⃣ ರಾಜ್ಯ ಯುವ ಜಾನಪದ ಸಮ್ಮೇಳನ

6️⃣ ರಾಜ್ಯ ಜನಪದ ಗಾಯಕರ ಸಮ್ಮೇಳನ

7️⃣ ರಾಜ್ಯ ಸೋಬಾನ ಹಾಡುಗಾರರ ಸಮ್ಮೇಳನ

8️⃣ ರಾಜ್ಯ ವೈದ್ಯರ ಜಾನಪದ ಸಮ್ಮೇಳನ

9️⃣ ರಾಜ್ಯ ಕನ್ನಡ ಪ್ರಾಧ್ಯಾಪಕರ ಜಾನಪದ ಸಮ್ಮೇಳನ

🔟 ರಾಜ್ಯ ಶಿಕ್ಷಕರ ಜಾನಪದ ಸಮ್ಮೇಳನ


🌿 ಕನ್ನಡ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.


– ಡಾ. ಜಾನಪದ ಎಸ್. ಬಾಲಾಜಿ

ರಾಜ್ಯಾಧ್ಯಕ್ಷರು

ಕನ್ನಡ ಜಾನಪದ ಪರಿಷತ್ 

Sunday, 1 March 2026

ಮಹಿಳೆಯರು ಜಾನಪದ ಸಂಸ್ಕೃತಿಯ ನಿಜವಾದ ಪರಂಪರೆ ಸಾರಥಿಗಳು-ಡಾ ಜಾನಪದ ಎಸ್ ಬಾಲಾಜಿ.


ಮಣಿಪಾಲ.-ರತ್ನ ಸಂಜೀವ ಕಲಾಮಂಡಲ, ಸರಳೇ ಬೆಟ್ಟು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರು ಡಾ . ಜನಪದ ಎಸ್ ಬಾಲಾಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ,ಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವೆಂದು, ಜಾನಪದ ಮಹಿಳಾ ಪ್ರಧಾನವಾದದ್ದು, ಇಂದಿಗೂ ಜಾನಪದ ಜೀವಂತಿಕೆಗೆ ಮಹಿಳೆಯರೇ ಮುಖ್ಯ ಕಾರಣ ಕನ್ನಡ ಜಾನಪದ ಪರಿಚಿತ ದಶಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಮಹಿಳಾ ಘಟಕಗಳನ್ನು ಸ್ಥಾಪಿಸಿ ಮಹಿಳಾ ಜಾನಪದ ಸಬಲೀಕರಣದ ಬಗ್ಗೆ ಒತ್ತು ನೀಡಲಾಗುವುದನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗಣನಾಥ್ ಎಕ್ಕಾರು, ಅಧ್ಯಕ್ಷರು ಶಿವರಾಮ ಕಾರಂತ ಪ್ರತಿಷ್ಠಾನ ವಹಿಸಿ ಮಾತನಾಡಿ, ಮಹಿಳೆಯರು ಪ್ರತಿ ಹಂತದಲ್ಲೂ ಜಾನಪದ ಸಂವರ್ಧನೆಯಲ್ಲಿ ಕೊಡುಗೆ ನೀಡಿದ್ದಾರೆ, ಜಾನಪದ ಜಾಗೃತಿ ಮೂಡಿಸುವುದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ರಚಿಸುವ ಮೂಲಕ ಮಹಿಳೆಯರಲ್ಲಿ ಜಾನಪದ ಜಾಗೃತಿ ಮೂಡಿಸುತ್ತಿರುವುದು ಅನುಕರಣಿಯ ಎಂದು ತಿಳಿಸಿದರು.
 ಕನ್ನಡ ಜಾನಪದ ಪುರುಷದ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಮೇ ತಿಂಗಳಲ್ಲಿ ಏರ್ಪಡಿಸಲಾಗುವುದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ವಿದ್ಯುಷಿ ಗೀತಾ ಹೆಬ್ಬಾರ್ ಕಾರ್ಯದರ್ಶಿಯಾಗಿ ಪ್ರಭ ಹಾಗೂ ಇತರೆ 11 ಜನ ಸದಸ್ಯರು ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಅವರಿಂದ ಪದಪತ್ರ ಸ್ವೀಕರಿಸಿದರು. ಎಲ್ಲಾ ಪದಾಧಿಕಾರಿಗಳಿಗೆ ಡಾ ಭಾರತಿ ಬರುವಂತೆ ಜಾನಪದ ಪ್ರತಿಜ್ಞಾವಿಧಿ ಬೋಧಿಸಿದರು.

 ಶಿವಪ್ರೇರಣ ಚಾರ್ಟೇಬಲ್ ಟ್ರಸ್ಟ್ ಅಧ್ಯಕ್ಷರು ಮಹೇಶ್ ಠಾಕೂರ್ ಅವರನ್ನು ಗೌರವಿಸಿ ಅಭಿನಯಿಸಲಾಯಿತು.

  ಪುತ್ತಿಗೆ ಮಠದ ದಿವಾನರು ನಾಗರಾಜ್ ಆಚಾರ್ಯ, ಮಾಜಿ ಕೌನ್ಸಿಲರ್ ನರಸಿಂಹ ನಾಯಕ್, ರಮಾನಂದ ಸಾಮಂತ, ರಾಘವೇಂದ್ರ ಕರ್ವಾಲ್, ಕೌಶಿಕ್ ಉಪಸ್ಥಿತರಿದ್ದರು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಜಾನಪದ ಅಭಿಮಾನಿಗಳು, ಮಹಿಳಾ ಪ್ರತಿನಿಧಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Friday, 27 February 2026

ಕುಡುಬಿ ಸಮುದಾಯದ ಬಗ್ಗೆ ಪಠ್ಯವಾಗಲಿ -ಡಾ ಜಾನಪದ ಎಸ್ ಬಾಲಾಜಿ



 ಬ್ರಹ್ಮಾವರ: -
 ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಫೆ.27 ಶುಕ್ರವಾರ ಆಯೋಜಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಮಾತನಾಡುತ್ತಾ, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ, ಕುಡುಬಿ ಸಮುದಾಯಗಳ ಪಾರಂಪರಿಕ ಆಚರಣೆಗಳು, ಮೌಕಿಕ ಪರಂಪರೆ ಹಾಗೂ ಪ್ರದರ್ಶನ ಕಲೆಗಳ ಕುರಿತು ಪಠ್ಯಆಗಬೇಕು ಹಾಗೂ ಪ್ರತ್ಯೇಕ ಕರ್ನಾಟಕ ಬುಡಕಟ್ಟು ಅಕಾಡೆಮಿ ಸ್ಥಾಪನಾಗಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.

 ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ಗಣೇಶ್ ಗಂಗೊಳ್ಳಿ ಜನಪದ ಹಾಗೂ ಬುಡಕಟ್ಟು ಕಲಾವಿದರ ಕುರಿತು ಉಡುಪಿ ಜಿಲ್ಲಾಧ್ಯಂತ ಸಮೀಕ್ಷೆ ಕೈಗೊಳ್ಳಲಾಗುವುದು ದಶಮಾನೋತ್ಸವ ಅಂಗವಾಗಿ ಗ್ರಾಮ ಘಟಕಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

 ಹಿರಿಯ ಕುಡುಬಿ ಹೋಳಿ ಕಲಾವಿದರಾದ ಶೀನ ನಾಯ್ಕ್ ಮಂಡಕರ ಹಾಗೂ ರಾಮಣ್ಣ ನಾಯ್ಕ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.

 ಕುಡುಬಿ ಸಮುದಾಯದ ನೃತ್ಯ ಪ್ರದರ್ಶನ ಹಾಗೂ ಕೋಲಾಟವನ್ನು ಏರ್ಪಡಿಸಲಾಗಿತ್ತು.

  ದೇಗುಲದ ಟ್ರಸ್ಟಿ ರಾಜಾರಾಮ್ ಶೆಟ್ಟಿ, ಪ್ರತಾಪ್ ಶೆಟ್ಟಿ 
ಕೊಳ್ಕೆಬೈಲು, ಜಿಲ್ಲಾ ಪ್ರ. ಕಾರ್ಯದರ್ಶಿ ರಾಘವೇಂದ್ರ ಪ್ರಭು ಕವಾ೯ಲು, ಸದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Thursday, 19 February 2026

ಜಾನಪದ ಎಸ್ ಬಾಲಾಜಿ ಪರಿಚಯ

ಡಾ. ಜಾನಪದ ಎಸ್. ಬಾಲಾಜಿ ಕರ್ನಾಟಕದ ಜನಪದ ಸಂಸ್ಕೃತಿ, ಕಲಾ ಪರಂಪರೆ ಮತ್ತು ಜನಪದ ಕಲಾವಿದರ ಉಳಿವು-ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಸಂಸ್ಕೃತಿ ಚಿಂತಕ, ಜನಪದ ಸಂಶೋಧಕ ಹಾಗೂ ಯುವ ಸಂಘಟಕ.

Dr. Janapada S. Balaji is a folklorist, cultural activist, and youth organiser from Karnataka dedicated to the preservation, documentation, and promotion of folk traditions and artists.

---

## ಮೂಲ ಮತ್ತು ದೃಷ್ಟಿಕೋನ | Background & Vision

ಬೆಂಗಳೂರು ಮೂಲದ ಬಾಲಾಜಿ ಅವರು ಗ್ರಾಮೀಣ ಸಂಸ್ಕೃತಿ, ಜನಪದ ಪರಂಪರೆ ಮತ್ತು ಕಲೆಗಳ ಮೇಲೆ ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡರು. ಜನಪದ ಕಲೆಗಳು ಮತ್ತು ಕಲಾವಿದರ ಬದುಕು ಉಳಿಯಬೇಕು ಎಂಬ ದೃಷ್ಟಿಯಿಂದ ಅವರು ಕಾರ್ಯಾರಂಭ ಮಾಡಿದರು.

Born in Bengaluru, he developed a deep interest in rural traditions and folklore early in life. His vision focuses on safeguarding intangible cultural heritage and sustaining the livelihoods of folk artists.

---

## ಸಂಸ್ಥಾಪನಾ ನಾಯಕತ್ವ | Institutional Leadership

ಅವರು **Kannada Janapada Parishath** ಸಂಸ್ಥೆಯ ಸ್ಥಾಪಕರಾಗಿದ್ದು, ಕರ್ನಾಟಕದ ಜನಪದ ಕಲೆಗಳ ಸಂರಕ್ಷಣೆ, ದಾಖಲಾತಿ ಮತ್ತು ಪ್ರಚಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

He is the founder of Kannada Janapada Parishath, an organisation working to document, promote, and protect the diverse folk traditions of Karnataka.

---

## ಜನಪದ ಕ್ಷೇತ್ರದಲ್ಲಿ ಕೊಡುಗೆಗಳು | Contributions to Folk Culture

### 📚 ದಾಖಲಾತಿ ಮತ್ತು ಸಂಶೋಧನೆ | Documentation & Research

* ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಜನಪದ ಕಲಾರೂಪಗಳ ಅಧ್ಯಯನ

* ಜನಪದ ಕಲಾವಿದರ ಮಾಹಿತಿ ಸಂಗ್ರಹಣೆ

* ಗ್ರಾಮೀಣ ಪರಂಪರೆ ಮತ್ತು ಆಚರಣೆಗಳ ದಾಖಲಾತಿ

* Surveyed and documented over 250 folk art forms and artists

* Built networks of performers and researchers

* Preserved oral traditions, rituals, and community knowledge

### 🎭 ಕಲಾವಿದರ ಬೆಂಬಲ | Artist Welfare

* ಕಲಾವಿದರ ಗೌರವ ಮತ್ತು ಆರ್ಥಿಕ ಭದ್ರತೆಗೆ ಹೋರಾಟ

* ಸರ್ಕಾರದ ಮಟ್ಟದಲ್ಲಿ ಕಲಾವಿದರ ಹಕ್ಕುಗಳ ಪರ ವಾದ

* Advocates welfare schemes, pensions, and recognition for folk artists

* Raises cultural policy issues and grassroots concerns

### 👥 ಯುವಜನ ಚಳವಳಿ | Youth Engagement

* ಜನಪದ ಜಾಗೃತಿ ಕಾರ್ಯಕ್ರಮಗಳು

* ಯುವಜನರನ್ನು ಸಂಸ್ಕೃತಿ ಕಾರ್ಯಗಳಲ್ಲಿ ಸೇರಿಸುವ ಪ್ರಯತ್ನ

* Initiated youth networks and cultural awareness programmes

* Encouraged youth participation in folklore preservation

### 🏛 ಜನಪದ ಕೂಟೀರ | Janapada Kutira

* ಕಾರ್ಯಾಗಾರ, ವಾಸ್ತವ್ಯ ಕಾರ್ಯಕ್ರಮಗಳು

* ಜನಪದ ವಾದ್ಯ ಸಂಗ್ರಹಾಲಯ

* Cultural hub for workshops, residencies, and folk instrument preservation

---

## ಸಾರ್ವಜನಿಕ ಪಾತ್ರಗಳು | Public Roles

* ಸಂಸ್ಕೃತಿ ಸಲಹಾ ಚಟುವಟಿಕೆಗಳಲ್ಲಿ ಭಾಗವಹಣೆ

* ಯುವಜನ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾಯಕತ್ವ

* Associated with cultural advisory initiatives

* Active in youth development and community programmes

---

## ಪತ್ರಿಕಾ ಉಲ್ಲೇಖಗಳು | Media & Public Presence

* ಜನಪದ ಕಲಾವಿದರ ಪಿಂಚಣಿ ಹೆಚ್ಚಳದ ಬೇಡಿಕೆ

* ಆದಿವಾಸಿ ಸಂಸ್ಕೃತಿ ಸಂರಕ್ಷಣೆ ಕುರಿತು ಅಭಿಯಾನ

* ಜನಪದ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಣೆ

* Advocacy for artist pensions and welfare

* Campaigns for preservation of tribal and rural traditions

* Participation in conferences, cultural events, and media discussions

*(ಈ ವಿಭಾಗದಲ್ಲಿ ನಿಮ್ಮ ಪತ್ರಿಕಾ ಕತ್ತರಣೆಗಳು / paper cuttings ಸೇರಿಸಬಹುದು.)*

---

## ಪ್ರಭಾವ ಮತ್ತು ಪರಂಪರೆ | Impact & Legacy

ಡಾ. ಬಾಲಾಜಿ ಅವರ ಕಾರ್ಯವು ಜನಪದ ಪರಂಪರೆಯನ್ನು ಇಂದಿನ ಪೀಳಿಗೆಯೊಂದಿಗೆ ಸಂಪರ್ಕಿಸುತ್ತದೆ. ಅವರು ಜನಪದ ಕಲಾವಿದರು, ಯುವಕರು ಮತ್ತು ಸಂಸ್ಥೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

Tuesday, 10 February 2026

ಜಾನಪದದ ನಾಡಿಗೆ ಬೆಳಕು -ಜಾನಪದ ಎಸ್ ಬಾಲಾಜಿ

ಜನಪದದ ನಾಡಿಗೆ ಬೆಳಕಾದವರು ಡಾ. ಜನಪದ ಎಸ್. ಬಾಲಾಜಿ ಅವರು…

ಹಳ್ಳಿ ಹಾದಿಯ ಹಾಡುಗಳನ್ನುಹೃದಯದಲ್ಲಿ ಹೊತ್ತವರು,ಪಾರಂಪರ್ಯದ ಪದಗಳನ್ನುಪೀಳಿಗೆಗೆ ತಲುಪಿಸಿದವರು.

ಜನಪದವೇ ಜೀವನವೆಂದುಜೀವನವನ್ನು ಅರ್ಪಿಸಿದವರು,ಸಂಸ್ಕೃತಿಯ ಸುವಾಸನೆಗಳನ್ನುಪುಸ್ತಕಗಳಲ್ಲಿ ಹರಡಿಸಿದವರು.

“ಮಲ್ಲಿಗೆ ತೆನೆ”ಯ ಮಧುರತೆ,“ಅರಿವಿನ ಮನೆಯಲ್ಲಿ…” ಜ್ಞಾನದ ಬೆಳಕು,“ಜನಪದ ನೂರೊಂದು”, “ಜಲ ಜನಪದ”, “ಶೋಬನ”ಎಲ್ಲವೂ ಅವರ ಸಾಧನೆಯ ಮೆಲುಕು.

ಯುವ ಮನಗಳಿಗೆ ಸ್ಪೂರ್ತಿ,ಜನಪದ ಲೋಕಕ್ಕೆ ಸಾರಥಿ —ಡಾ. ಎಸ್. ಬಾಲಾಜಿ ಅವರ ಪಥನಮ್ಮ ಹೆಮ್ಮೆಯ ದಾರಿಹೊರೆ.

Tuesday, 20 January 2026

JANAPADA S BALAJI (folklore S Balaji)

Janapada S Balaji (often referred to simply as Dr. S Balaji or Janapada Balaji / Jogi Balaji) is a prominent Kannada cultural activist and folklorist from the Indian state of Karnataka, known especially for his work in preserving and promoting janapada (folk) arts and culture.  

🌾 Who He Is
• Founder of Kannada Janapada Parishath: Dr. S Balaji established the Kannada Janapada Parishath, an organization dedicated to documenting, promoting, and preserving the rich folk traditions of Karnataka.  
• Nicknames: He is affectionately known as Janapada Balaji or Jogi Balaji among cultural circles and well-wishers.  

🎭 Contributions to Folk Culture
• Folk Documentation: He has surveyed and documented over 250 diverse folk art forms and the artists who practice them, creating one of the largest networks of folk artists across Karnataka.  
• Artisan Support & Advocacy: Balaji actively works to support folk artists—advocating for their rights, recognition, and welfare both at the grassroots level and within cultural policy frameworks.  
• Youth Engagement: He initiated a youth network called the Folklore Youth Brigade, aimed at outreach, cultural awareness, and addressing challenges that folk performers face.  
• Janapada Kutira: Under his leadership, Janapada Kutira was created—a physical hub that hosts residencies, workshops, and houses a museum of folk instruments to sustain traditional art practices.  

📜 Roles & Recognition
• Government Advisory: Dr. S Balaji serves on cultural advisory bodies such as the ICCR’s (Indian Council for Cultural Relations) RAC and as a state advisory member for NSS (National Service Scheme), Government of Karnataka.  
• Folk Artist Welfare: In his capacity with the Kannada Janapada Parishath, he has voiced public appeals for better pensions and support systems for traditional artists in Karnataka.  

🪕 Legacy & Impact

Balaji’s work bridges traditional folk heritage with contemporary cultural activism—helping to preserve art forms that may otherwise fade under modern pressures. He has strengthened community and youth participation in folk arts and fostered institutional support and networks for artists throughout Karnataka.  

If you’d like, I can share links to his talks or interviews online!

Saturday, 3 January 2026

ಪರಿಷತ್ತಿನ ದಿನದರ್ಶಿಕೆ ಬಿಡುಗಡೆ

ಕನ್ನಡ ಜಾನಪದ ಪರಿಷತ್ತಿ ನದರ್ಶಿಕೆ ಬಿಡುಗಡೆ ಗೋಕಾಕ :  ಕನ್ನಡ ಜಾನಪದ ಪರಿಷತ್ ಬೆಂಗಳೂರು  2026 ನೇ ಸಾಲಿನ ದಿನದರ್ಶಿಕೆಯನ್ನು  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ  ಶೂನ್ಯ ಸಂಪಾದನೆ ಮಠದ  ಪೀಠಾಧ್ಯಕ್ಷರು ಶ್ರೀ ಶ್ರೀ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ  ಹಾಗೂ ಭಾರತದ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್ ಬಾಲಾಜಿ  ಮುಜರಾಯಿ ಇಲಾಖೆ ನಿವೃತ್ತ ಕಾರ್ಯನಿರ್ವಾಹ ಅಧಿಕಾರಿ  ತೋಟಾರ್ ಗತ್ತಿ, ಹಿರಿಯ ಪಾರಿಜಾತ ಕಲಾವಿದರು ಈಶ್ವರ್ ಚಂದ್ರ ಬೆಟಿಗೇರಿ, ಯೋಗ ಗುರುಗಳಾದ ಆನಂದ್ ಸ್ವರಗಾವಿ, ಕನ್ನಡ ಜಾನಪದ ಪರಿಷತ್  ಧಾರಾವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಎಂ,ಯುವ ಘಟಕದ  ಮಹಾಲಿಂಗ ಬಿಸನಕೊಪ್ಪ, ಮುತ್ತು, ಗಿರೀಶ್ ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...