ಹಳ್ಳಿ ಹಾದಿಯ ಹಾಡುಗಳನ್ನುಹೃದಯದಲ್ಲಿ ಹೊತ್ತವರು,ಪಾರಂಪರ್ಯದ ಪದಗಳನ್ನುಪೀಳಿಗೆಗೆ ತಲುಪಿಸಿದವರು.
ಜನಪದವೇ ಜೀವನವೆಂದುಜೀವನವನ್ನು ಅರ್ಪಿಸಿದವರು,ಸಂಸ್ಕೃತಿಯ ಸುವಾಸನೆಗಳನ್ನುಪುಸ್ತಕಗಳಲ್ಲಿ ಹರಡಿಸಿದವರು.
“ಮಲ್ಲಿಗೆ ತೆನೆ”ಯ ಮಧುರತೆ,“ಅರಿವಿನ ಮನೆಯಲ್ಲಿ…” ಜ್ಞಾನದ ಬೆಳಕು,“ಜನಪದ ನೂರೊಂದು”, “ಜಲ ಜನಪದ”, “ಶೋಬನ”ಎಲ್ಲವೂ ಅವರ ಸಾಧನೆಯ ಮೆಲುಕು.
ಯುವ ಮನಗಳಿಗೆ ಸ್ಪೂರ್ತಿ,ಜನಪದ ಲೋಕಕ್ಕೆ ಸಾರಥಿ —ಡಾ. ಎಸ್. ಬಾಲಾಜಿ ಅವರ ಪಥನಮ್ಮ ಹೆಮ್ಮೆಯ ದಾರಿಹೊರೆ.
No comments:
Post a Comment