ಮಣಿಪಾಲ.-ರತ್ನ ಸಂಜೀವ ಕಲಾಮಂಡಲ, ಸರಳೇ ಬೆಟ್ಟು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರು ಡಾ . ಜನಪದ ಎಸ್ ಬಾಲಾಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ,ಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವೆಂದು, ಜಾನಪದ ಮಹಿಳಾ ಪ್ರಧಾನವಾದದ್ದು, ಇಂದಿಗೂ ಜಾನಪದ ಜೀವಂತಿಕೆಗೆ ಮಹಿಳೆಯರೇ ಮುಖ್ಯ ಕಾರಣ ಕನ್ನಡ ಜಾನಪದ ಪರಿಚಿತ ದಶಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಮಹಿಳಾ ಘಟಕಗಳನ್ನು ಸ್ಥಾಪಿಸಿ ಮಹಿಳಾ ಜಾನಪದ ಸಬಲೀಕರಣದ ಬಗ್ಗೆ ಒತ್ತು ನೀಡಲಾಗುವುದನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗಣನಾಥ್ ಎಕ್ಕಾರು, ಅಧ್ಯಕ್ಷರು ಶಿವರಾಮ ಕಾರಂತ ಪ್ರತಿಷ್ಠಾನ ವಹಿಸಿ ಮಾತನಾಡಿ, ಮಹಿಳೆಯರು ಪ್ರತಿ ಹಂತದಲ್ಲೂ ಜಾನಪದ ಸಂವರ್ಧನೆಯಲ್ಲಿ ಕೊಡುಗೆ ನೀಡಿದ್ದಾರೆ, ಜಾನಪದ ಜಾಗೃತಿ ಮೂಡಿಸುವುದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ರಚಿಸುವ ಮೂಲಕ ಮಹಿಳೆಯರಲ್ಲಿ ಜಾನಪದ ಜಾಗೃತಿ ಮೂಡಿಸುತ್ತಿರುವುದು ಅನುಕರಣಿಯ ಎಂದು ತಿಳಿಸಿದರು.
ಕನ್ನಡ ಜಾನಪದ ಪುರುಷದ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಮೇ ತಿಂಗಳಲ್ಲಿ ಏರ್ಪಡಿಸಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ವಿದ್ಯುಷಿ ಗೀತಾ ಹೆಬ್ಬಾರ್ ಕಾರ್ಯದರ್ಶಿಯಾಗಿ ಪ್ರಭ ಹಾಗೂ ಇತರೆ 11 ಜನ ಸದಸ್ಯರು ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ ಅವರಿಂದ ಪದಪತ್ರ ಸ್ವೀಕರಿಸಿದರು. ಎಲ್ಲಾ ಪದಾಧಿಕಾರಿಗಳಿಗೆ ಡಾ ಭಾರತಿ ಬರುವಂತೆ ಜಾನಪದ ಪ್ರತಿಜ್ಞಾವಿಧಿ ಬೋಧಿಸಿದರು.
ಶಿವಪ್ರೇರಣ ಚಾರ್ಟೇಬಲ್ ಟ್ರಸ್ಟ್ ಅಧ್ಯಕ್ಷರು ಮಹೇಶ್ ಠಾಕೂರ್ ಅವರನ್ನು ಗೌರವಿಸಿ ಅಭಿನಯಿಸಲಾಯಿತು.
No comments:
Post a Comment