Monday, 22 December 2025

ಜಾನಪದ ಎಂದಿಗೂ ನಶಿಸುವುದಿಲ್ಲ- ಜಾನಪದ ಬಾಲಾಜಿ

ಜಾನಪದ ನಶಿಸುವದಿಲ್ಲ, ಹಾಗೆ ಆಗದಂತೆ ನಾವೂ ಕೆಲಸ ಮಾಡಬೇಕು: ಬಾಲಾಜಿ

ಹುಬ್ಬಳ್ಳಿ: ಇಲ್ಲಿನ ಜಾನಪದ ಎಂದಿಗೂ ನಶಿಸುವುದಿಲ್ಲ ಹಾಗೆ ಆಗಲು ಸಹ ಬಿಡಬಾರದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್. ಬಾಲಾಜಿ ಅಭಿಪ್ರಾಯ ಪಟ್ಟರು.
ಅವರು ಕುಂದಗೋಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಕುಂದಗೋಳ ತಾಲೂಕು ಘಟಕ ಉದ್ಘಾಟನೆ, ವಿಶ್ವ ಜಾನಪದ ಮತ್ತು ಬುಡಕಟ್ಟು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಾನಪದ ಕಾಲಕ್ರಮೇಣ ಪರಿವರ್ತನೆಗೊಳ್ಳುತ್ತದೆ ಹೊರತು ನಶಿಸುವುದಿಲ್ಲ ಎಂದ ಅವರು ಯುವಜನರು ಹಾಗೂ ವಿದ್ಯಾರ್ಥಿಗಳು ಜಾನಪದ ಜಾಗೃತಿ ಮೂಡಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕೆಂದು ಯುವಜನರಿಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲೀಕರಣ ಕಂಪ್ಯೂಟರೀಕರಣ ಆಧುನಿಕರಣಗಳ ಭರಾಟೆ ಸಹ ಜಾನಪದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ‌. ಎಸ್. ಶಿರಿಯಪ್ಪಗೌಡರ, ಜನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆಗೋಸ್ಕರ ಕನ್ನಡ ಜಾನಪದ ಪರಿಷತ್ ಉದಯವಾಗಿದ್ದು, ಈ ಬಗ್ಗೆ ಕುಂದಗೋಳ ಅಳಿವಿನಂಚಿನಲ್ಲಿ ಜನಪದ ಕಲೆಗಳನ್ನು ಪುನಶ್ಚೇತನ ಮಾಡುವ ಕಾರ್ಯ ಕನ್ನಡ ಜಾನಪದ ಪರಿಷತ್ ಕುಂದಗೋಳ ಘಟಕದಿಂದ ಮಾಡಲಾಗುವುದು ಎಂದರು.
ಪದಪ್ರದಾನ ಮಾಡಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ರಿಯಾಜ್ ಪಾಷ ಮಾತನಾಡಿ, ನೆಲಮೂಲದ ಜಾನಪದವನ್ನು ಯುವ ಜನರಿಗೆ ಪದ್ಯ ಗದ್ಯಗಳ ಮೂಲಕ ಅರಿವು ನೀಡುವ ಕಾಲಘಟ್ಟದಲ್ಲಿ ನಾವು ಇದ್ದೇವೆ, ಈ ಕಾರ್ಯವನ್ನು ಪ್ರಾಧ್ಯಾಪಕರು ಉಪನ್ಯಾಸಕರು ಶಿಕ್ಷಕರು ಪ್ರಾಮಾಣಿಕತೆಯಿಂದ ಮಾಡಿ ಎಂದು ಮನವಿ ಮಾಡಿದರು.
ಕಾಲೇಜು ಸಿಬ್ಬಂದಿ ಶೋಭಾ ಹಾಗೂ
ವಿದ್ಯಾರ್ಥಿ ಕಿರಣ್ ಜನಪದ ಗೀತೆ ಹಾಡಿದರು.
ಕನ್ನಡ ಜಾನಪದ ಪರಿಷತ್ ತಾಲ್ಲೂಕ ಕಾರ್ಯದರ್ಶಿ ಡಾ. ವಿಜಯಕುಮಾರ್ ಮಲ್ಲಿಕಾರ್ಜುನ ನಿರೂಪಣೆ ಮಾಡಿದರು, ಜಂಟಿ ಕಾರ್ಯದರ್ಶಿ ಪ್ರೊ. ಕೃಷ್ಣಪ್ಪ ಲಮಾಣಿ ಸ್ವಾಗತಿಸಿದರು, ಖಜಾಂಜಿ ಪ್ರೊ. ಮೊಹಮ್ಮದ್ ಯೂಸಫ್ ಲಷ್ಕರ್ ವಂದಿಸಿದರು.

ಕನ್ನಡ ಜಾನಪದ ಪರಿಷತ್ ಧಾರಾವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಎಂ, ಯುವ ಘಟಕದ ಜಿಲ್ಲಾ ಅಧ್ಯಕ್ಷರು ಮಹೇಶ್ ತಳವಾರ್, ತೇಜು, ಮಾರುತಿ, ಮುದುಕಣ್ಣ ಉಪಸ್ಥಿತರಿದ್ದರು.

No comments:

Post a Comment

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...