Saturday, 18 March 2023

ಯುವ ಜಾನಪದ



ಜನಪದ ಉಳಿವಿಗಾಗಿ ಹುಟ್ಟಿತು
ನಮ್ಮ ಕನ್ನಡ ಜಾನಪದ ಪರಿಷತ್ತು
ಇದರ ಕಂದನೆ ಜಾನಪದ ಯುವ ಬ್ರಿಗೇಡ್
ತಾಯಿಯ ಜೊತೆ ಕೈಜೋಡಿಸಿತು


ಯುವಕರ ಧ್ವನಿಯು ಜನಪದವಾಯಿತು
ಜನಪದ ಶಕ್ತಿಯು ಈಗರಿವಾಯಿತು
ಯುವಶಕ್ತಿಯು ಕೈಜೋಡಿಸಿತು
ಇದೆಲ್ಲಾ ಜನಪದ ಯುವ ಬ್ರಿಗೇಡ್ ನಿಂದಾಯಿತು


ಯುವಕರನೆಲ್ಲ ಬಡಿದೆಬ್ಬಿಸಿತು
ಜಾನಪದ ಬೆಳೆಸಲು ಕರೆಯನ್ನಿಟ್ಟಿತು
ಜಾನಪದಕ್ಕಾಗಿ ಜೀವನ ಎಂದಿತು
ಯುವಶಕ್ತಿ ಇದಕ್ಕೆ ಕೈಜೋಡಿಸಿತು



ಕೋವಿಡ್ ತಾಂಡವ ದಲ್ಲಿ ಲೋಕಾರ್ಪಣೆಯಾಯಿತು
ನಮ್ಮ ಸಂಸ್ಕೃತಿ ನಾವೆ ಉಳಿಸೋಣ ಎಂದಿತು
ಡಾ.ಎಸ್.ಬಾಲಾಜಿಯವರು ಜಾನಪದ ಜಂಗಮರು
ಎರಡು ಸಾವಿರದ ಇಪ್ಪತ್ತರಲ್ಲಿ ಸ್ಥಾಪಿಸಿದರು



ಜಾನಪದ ಯುವ ಬ್ರಿಗೇಡ್ ಜಾನಪದ ಯುವ ಬ್ರಿಗೇಡ್
ಜಾನಪದ ರಕ್ಷಣೆಗಾಗಿ
ಜನಪದ ಯುವ ಬ್ರಿಗೇಡ್ ಜಾನಪದ ಯುವ ಬ್ರಿಗೇಡ್
ಜಾನಪದ ಕಲಾವಿದರಿಗಾಗಿ
ಜಾನಪದ ಯುವಕ ಜಾನಪದ ಯುವ ಬ್ರಿಗೇಡ್
ನಾಡಿನ ಯುವ ಶಕ್ತಿಗಾಗಿ


          - ಕಿಶೋರ್ ಡಿ ಪಾಟೀಲ್

ಸಂಚಾಲಕರು ಕುಷ್ಟಗಿ ಜಾನಪದ ಯುವ ಬ್ರಿಗೇಡ್

Friday, 17 March 2023

ಜಾನಪದ ಯುವ ಬ್ರಿಗೇಡ್ ಸೇರಿರಿ..... ನಮ್ಮ ಸಂಸ್ಕೃತಿ ನಾವೇ ಉಳಿಸೋಣ ಬನ್ನಿ

ಮನುಷ್ಯನ ಜೊತೆಗೆ ಹುಟ್ಟಿದೆ ಜಾನಪದ ಜಾನಪದಕ್ಕೆ ಎಂದಿಗೂ ಸಾವಿಲ್ಲ ಜಾನಪದ ಎಂದರೆ ಜನ ಸಮೋಹ  ಒಟ್ಟು 257 ವಿಧವಾದ ಪ್ರದರ್ಶನ ಕಲೆಗಳು 25 ವಿಧವಾದ ಗೀತಾ ಪ್ರಕಾರಗಳು ಐದು ಮಹಾಕಾವ್ಯಗಳು 75ಕ್ಕಿಂತ ಹೆಚ್ಚು ಕಂಡ ಕಾವ್ಯಗಳು ಇವೆ ಈಗಿನ ಯುವಕ ಯುವತಿಯರಿಗೆ ವಿದ್ಯಾರ್ಥಿಗಳಿಗೆ ಆಗಿರಬಹುದು ಜನಪದ ಕಲೆಯ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲ 257 ಕಲೆಗಳಲ್ಲಿ ಕನಿಷ್ಠ 10 ಕಲೆಗಳ ಹೆಸರು ತಿಳಿಯದೆ ಇರುವುದು ತುಂಬಾ ವಿಚಾರವಾಗಿದೆ ಡೊಳ್ಳು ಕುಣಿತ ಸೋಬಾನ ಪದ ಕಂಸಾಳೆ ನೃತ್ಯ ಪೂಜೆ ಕುಣಿತ ವೀರಗಾಸೆ ಅಂತಿ ಪದ ಗೀಗಿ ಪದ ರಿವಾಯತ್ ಪದ ಹೀಗೆ ಹೀಗೆ ಅನೇಕ ಜಾನಪದ ಕಾರಗಳು ಅಸ್ತಿತ್ವದಲ್ಲಿ ಇದೆ ಇವುಗಳನ್ನು ಯುವಕರಿಗೆ ತಲುಪಿಸುವ ಪ್ರಯತ್ನವಾಗಿ ಕನ್ನಡ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷರಾದ ಡಾ.ಎಸ್. ಬಾಲಾಜಿಯವರು ಜಾನಪದ ಯುವ ಬ್ರಿಗೇಡ್ ಎಂಬ ಸಂಘಟನೆಯನ್ನು ಲೋಕಾರ್ಪಣೆ ಮಾಡುತ್ತಾರೆ  ಏಪ್ರಿಲ್ 25 2020 ರಂದು ಕರೋನಾ ತಾಂಡವದಲ್ಲಿಯೂ ಕೂಡ ಅಲುಗಾಡದೆ ಗಟ್ಟಿಯಾಗಿ ನಿಂತಿತ್ತು ಇಂದು ಅನೇಕ ಜಾನಪದ ಪರ ಜಾನಪದ ಕಲಾವಿದರ ಕಾರ್ಯಗಳು ಜನಪದ ಯುವ ಬ್ರಿಗೇಡ್ ನಿಂದ ನಡೆಯುತ್ತಿದೆ ಮರ ಮಾಚಿದ ಪ್ರತಿಭೆಗಳನ್ನು ಬೆಳಕಿಗೆ ತಂದು ಅವರಿಗೆ ಸಿಗಬೇಕಾದ ಸ್ಥಾನಮಾನವನ್ನು ಕೊಡಿಸುವ ಪ್ರಯತ್ನವನ್ನು ಇಂದು ಜಾನಪದ ಯುವ ಬ್ರಿಗೇಡ್ ಮಾಡುತ್ತಿದೆ ಈ ಸಂಘಟನೆಯು ಕನ್ನಡ ಜಾನಪದ ಪರಿಷತ್ನ ಅಂಗ ಸಮಸ್ತೆ ಎಂದು ಹೇಳುವುದಕ್ಕಿಂತ ಕನ್ನಡ ಜಾನಪದ ಪರಿಷತ್ನ ಕಂದ ಎಂದು ಹೇಳಬಹುದು ಮುಖ್ಯವಾಗಿ ಜಾನಪದ ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸೋಣ ಎಂದು ನೋಡಿ ಧ್ಯೇಯ ವಾಕ್ಯ ಎಷ್ಟು ಅರ್ಥಪೂರ್ಣವಾಗಿದೆ ನಮ್ಮ ಕಲೆಗಳನ್ನು ಸಂಸ್ಕೃತಿಯನ್ನು ನಾವೇ ಸಂರಕ್ಷಿಸಬೇಕು ಇಲ್ಲವೆಂದರೆ ವಿದೇಶಿಗರು ಕದಿಯುವ ಪ್ರಯತ್ನ ನಡೆಸುತ್ತಾರೆ ಯಾಕೆ ಈ ಮಾತನ್ನು ಹೇಳಿದೆ ಎಂದರೆ ಹಿಂದೆ ನಮ್ಮ ಋಷಿಮುನಿಗಳು ವಿಜ್ಞಾನವನ್ನು ವೇದ ಗ್ರಂಥಗಳಲ್ಲಿ ನಿರೂಪಿಸಿದ್ದರು ಅದನ್ನು ಬ್ರಿಟಿಷರು ಜರ್ಮನಿಯರು ಹಾಗೂ ಅನೇಕ ವಿದೇಶಿಗರು ಕೂಡ ಅದನ್ನು ಕಳ್ಳತನ ಮಾಡಿ ಅವರ ಅವರ ಸಂಶೋಧನೆ ಎಂದು ಪೇಟೆಂಟ್ ಮಾಡಿ ಕೀರ್ತಿ ಪಡೆದರು ಅದೇ ರೀತಿಯಾಗಿ ಜಾನಪದ ಕಲೆ ಕೂಡ ಆಗಬಾರದೆಂದು ನಮ್ಮ ಜಾನಪದ ಡಾ.ಎಸ್. ಬಾಲಾಜಿ ಯವರ ಚಿಂತನೆ ಗುರುತ್ವಾಕರ್ಷಣೆ ಫಲದ ಬಗ್ಗೆ ಆರ್ಯಭಟರು ತಮ್ಮ ಗ್ರಂಥದಲ್ಲಿ ಮೊದಲೇ ಉಲ್ಲೇಖಿಸಿದ್ದರು. ನಾವು ಪಠ್ಯದಲ್ಲಿ ಇಂದಿಗೂ ನ್ಯೂಟನ್ ಎಂದೇ ಕಲಿಯುತ್ತಿದ್ದೇವೆ ಈ ರೀತಿಯ ಪರಿಸ್ಥಿತಿ ಜಾನಪದಕ್ಕೆ ಬರಬಾರದೆಂದು ಜಾನಪದ ಯುವ ಬ್ರಿಗೇಡ್  ಅತ್ಯಂತ ಪ್ರಭಾವಿಯಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ ಇಷ್ಟಲ್ಲದೇ ಕರೋನ ಕಾಲಘಟ್ಟದಲ್ಲಿಯೂ ಕೂಡ ರಾಷ್ಟ್ರಮಟ್ಟದ ಜಾನಪದ ಸಮ್ಮೇಳನವನ್ನು ಆನ್ಲೈನ್ ಮೂಲಕ 12 ಗಂಟೆಗಳ ಕಾಲ ನಡೆಸಲಾಗಿತ್ತು ಹಾಗೆ ಎರಡು ವರೆ ಸಾವಿರ ಜನ ನಿರಂತರವಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ಸತತವಾಗಿ 101 ದಿನ101 ವಿಚಾರ ಸಂಕೀರ್ಣಗಳನ್ನು ಆನ್ಲೈನ್ ಮೂಲಕ ಜನರಿಗೆ ತಲುಪಿಸುವಂತಹ ಪ್ರಯತ್ನದಲ್ಲಿ ಜಾನಪದ ಯುವ ಬ್ರಿಗೇಡ್ ಮಗ್ನವಾಗಿತ್ತು ಕೇವಲ ವಿಚಾರ ಸಂಕೀರ್ಣಗಳನ್ನ ಅಷ್ಟೇ ಅಲ್ಲ ಅದರ ಹೊರತಾಗಿ ಕರೋನ ಸಮಯದಲ್ಲಿ ಜನಪದ ಕಲಾವಿದರ ಕಷ್ಟಗಳಿಗೆ ಸ್ಪಂದಿಸಲಾಗಿತ್ತು ಕೂಡ ಈಗ ನಮ್ಮ ಜಾನಪದ ಪರಿಷತ್ ಕರ್ನಾಟಕ ಅದ್ಯಂತ ಹೆಮ್ಮೆರವಾಗಿ ಬೆಳೆಯುತ್ತಿದೆ ಆ ಹೆಮ್ಮೆರವು ಜಾನಪದ ಕಲಾವಿದರಿಗೆ ನೆರಳು ಹಾಗೂ ತಮ್ಮ ಜಾನಪದ ಕಲೆಗಳಿಗೆ ಇನ್ನಷ್ಟು ಪೋಷಣೆಯನ್ನು ನೀಡುತ್ತಿದೆ ಒಟ್ಟು 31 ಜಿಲ್ಲೆಗಳು 170 ತಾಲೂಕುಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತದೆ 730 ಜನ ಸದಸ್ಯರನ್ನು ಒಳಗೊಂಡಿರುವ ಜಾನಪದ ಯುವ ಬ್ರಿಗೇಡ್ ಒಬ್ಬ ಸದಸ್ಯನಾಗಿರಲು ನಾನು ಹೆಮ್ಮೆ ಪಡುತ್ತೇನೆ.ಜಾನಪದ ಯುವ ಬ್ರಿಗೇಡ್ ಸೇರಿರಿ
ನಮ್ಮ ಸಂಸ್ಕೃತಿ ನಾವೇ ಉಳಿಸೋಣ ಬನ್ನಿ....
ಜೈ ಜಾನಪದ 

                  - ಕಿಶೋರ್ ಡಿ ಪಾಟಿಲ್
ಸಂಚಾಲಕ ಜಾನಪದ ಯುವ ಬ್ರಿಗೇಡ್ ಕುಷ್ಟಗಿ

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...