Wednesday, 17 November 2021
ಕಜಾಪ ವತಿಯಿಂದ ಮರವಂತೆಯಲ್ಲಿ ರಾಜ್ಯ ಮಟ್ಟದ ಜಲಜಾನಪಾದೋತ್ಸವ ಪೂರ್ವಭಾವಿ ಸಭೆ
ಮರವಂತೆಯಲ್ಲಿ ರಾಜ್ಯಮಟ್ಟದ ಜಲ ಜಾನಪದೋತ್ಸವದ ಪೂರ್ವಭಾವಿ ಸಭೆ : ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರ ಆಯೋಜನೆಯ 2021-2022ರ ರಾಜ್ಯಮಟ್ಟದ ಜಲ ಜಾನಪದೋತ್ಸವ ಕಾರ್ಯಕ್ರಮ ಈ ವರ್ಷ ಮರವಂತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿ ಸಭೆಯಾಗಿ ದಿನಾಂಕ-16-11-2021ರಂದು ಮರವಂತೆಯ ದುರ್ಗಾ ಯಕ್ಷೇಶ್ಚರಿ ದೇಗುಲದಲ್ಲಿ ಸಂಜೆ ಎಸ್.ಜನಾರ್ದನ ಮರವಂತೆ, ಪ್ರೊ.ಕನರಾಡಿ ವಾದಿರಾಜ ಭಟ್ ಇವರ ಮಾರ್ಗದರ್ಶನದಲ್ಲಿ ಸಮಾಲೋಚನೆ ಸಭೆ ನಡೆಸಲಾಯಿತು. ಡಾ.ಭಾರತಿ ಮರವಂತೆ ಕಾರ್ಯಕ್ರಮದ ಪಕ್ಷಿನೋಟವನ್ನು ಪ್ರಸ್ತಾವಿಸಿದರು. ಸಭೆಯಲ್ಲಿ ಕರುಣಾಕರ ಆಚಾರ್ಯ, ರವಿ ಮಡಿವಾಳ, ವಿನಾಯಕ ರಾವ್, ಅನಿತಾ ಆರ್.ಕೆ, .ಶಂಕರ ಬಿಲ್ಲವ, ಅಣ್ಣಪ್ಪ ಬಿಲ್ಲವ, ತಿಮ್ಮ ದೇವಾಡಿಗರು, ದಯಾನಂದ ಬಳೆಗಾರ್, ಶ್ರೀ.ರುಕ್ಮಿಣಿ(ಗ್ರಾಮ ಪಂಚಾಯತ್ ಅಧ್ಯಕ್ಷರು), ಮಂಜುನಾಥ ಮಧ್ಯಸ್ಥ, ಗಜೇಂದ್ರ ಖಾರ್ವಿ, ಮಹಾಬಲ ಕೆ., ಶೋಭಾ ದೇವಾಡಿಗ, ಸುಬ್ರಹ್ಮಣ್ಯ ಅವಭ್ರತ, ರಾಜೇಶ್ ಆಚಾರ್ಯ, ಸೋಮಯ್ಯ ಬಿಲ್ಲವ, ಶೇಖರ(ಗ್ರಾಮ ಪಂಚಾಯತ್), ದೇವಿದಾಸ್ ಶ್ಯಾನುಭಾಗ್, ಪ್ರಕಾಶ್ ಪಡಿಯಾರ್, ಕವಿತಾ ವಿಶ್ವನಾಥ್, ಲೋಕೇಶ್ ಖಾರ್ವಿ, ಶಂಕರ ಖಾರ್ವಿ, ವಾಸು ಖಾರ್ವಿ, ಸತೀಶ್ ಎಸ್.ಆರ್.ಪಿ,, ಸತೀಶ್ ಮಧ್ಯಸ್ಥರು, ....ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಚರ್ಚಿಸಿ ಅಂತಿಮದಲ್ಲಿ ಸರ್ವರ ಅಭಿಪ್ರಾಯದಂತೆ ಜಲಜಾನಪದೋತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಭೆಗೆ ಆಗಮಿಸಿ, ಚರ್ಚಿಸಿ, ಸೂಕ್ತ ಸಲಹೆ ಮಾರ್ಗದರ್ಶನ ನೀಡಿದ ಹಿರಿಯ ಬಂಧುಗಳಿಗೆ, ಸ್ನೇಹಿತರಿಗೆ, ಸಭೆಗೆ ಸ್ಥಳಾವಕಾಶ ನೀಡಿದ ಜಕ್ಕನಕಟ್ಟೆಯ ದುರ್ಗಾಯಕ್ಷೇಶ್ವರಿ ದೇಗುಲದವರಿಗೆ, ಸರ್ವರಿಗೂ ಕ.ಜಾ.ಪರಿಷತ್ ಪರವಾಗಿ, ರಾಜ್ಯಾಧ್ಯಕ್ಷರ ಪರವಾಗಿ ಧನ್ಯವಾದಗಳು. ಸರ್ವರ ಶುಭಾಶೀರ್ವಾದದಿಂದ ರಾಜ್ಯಮಟ್ಟದ ಕಾರ್ಯಕ್ರಮ ಕಡಲತಡಿಯಲ್ಲಿ ಯಶಸ್ಸು ಪಡೆಯುತ್ತದೆ ಎನ್ನುವ ನಿರೀಕ್ಷೆಯೊಂದಿಗೆ........
Subscribe to:
Post Comments (Atom)
ಕನ್ನಡ ಜಾನಪದ ಪರಿಷತ್ ಕಿರುಪರಿಚಯ
ಕನ್ನಡ ಜಾನಪದ ಪರಿಷತ್ ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ ಸ್ಥಾಪಿ...
-
Dr. Janapada S Balaji is a renowned figure in Karnataka's cultural scene, serving as the State President of the Kannada Janapada Parisha...
-
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಾಜ್ಯ ಯುವ ಪ್ರಶಸ್ತಿ ಪ್ರಧಾನ. ಕರ್ನಾಟಕ ರಾಜ್ಯ ಯುವ ಸಂಘಗಳಒಕ್ಕೂಟ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಂಯುಕ್ತ ಆಶ್ರಯ...
-
"ಜಾನಪದ ಬಾಲಾಜಿ" ಜನಿಸಿದರೂ ಸಿಲಿಕಾನ್ ಸಿಟಿ ಯಲ್ಲಿ, ಜೀವಿಸುತ್ತಿರುವರು ಜಾನಪದ ಸಾಹಿತ್ಯದಲ್ಲಿ. 250 ಕ್ಕೂ ಹೆಚ್ಚು ಕಲಾಪ್ರತಿಭೆಗಳ ಆಶ್ರಯದ...
No comments:
Post a Comment