ಕನ್ನಡ ಜಾನಪದ ಪರಿಷತ್ತಿಗೆ
ತುಂಬಿದೆ ದಶ ವರುಷ
ಅದುವೇ ನಮಗೆ ಹರುಷ ||
ಬೆಂಗಳೂರಿನಲಿ ಬಾಲಾಜಿಯವರು
ಕಟ್ಟಿದ್ದ ಪರಿಷತ್ತು
ಅದುವೇ ಕನ್ನಡ ಜಾನಪದ ಪರಿಷತ್ತು....||1||
ಜಿಲ್ಲಾ ಘಟಕ, ತಾಲೂಕು.ಗ್ರಾಮ , ಹೋಬಳಿ ಘಟಕದಿ ಬೆಳೆದಿಹ ಪರಿಷತ್ತು , ಬಾಲಾಜಿಯವರು ಕಟ್ಟಿ ಬೆಳಸಿಹ ಕನ್ನಡ ಜಾನಪದ ಪರಿಷತ್ತು ||2||
ನಮ್ಮ ನಾಡಿನ ಜಾನಪದ ಕಲೆ ಸಂಸ್ಕೃತಿಯನ್ನು
ಬೆಲೆಸಿ ...
ಮುಂದಿನ ಯುವ ಪೀಳಿಗೆಗೆ
ನೀಡಿ... ನೀಡುವ ಕಾರ್ಯವ ಸಂಘಟನೆಯಿಂದ ಮಾಡುತ್ತಿದೆ... ||3||
ಮಹಿಳಾ ಘಟಕವ ರಾಜ್ಯದಿ ಸ್ಥಾಪಿಸಿ
ಮಹಿಳೆಯರಿಂದಲೇ ಕಲೆ ಸಂಸ್ಕೃತಿಯನ್ನು ಪಸರಿಸುವ ಕಾರ್ಯ ಮಾಡುತ್ತಿದೆ... || 4 ||
ಡಾ.ಎಸ್ ಬಾಲಾಜಿಯವರು ಕಟ್ಟಿಬೆಳೆಸಿಹ ಕನ್ನಡ ಜಾನಪದ ಪರಿಷತ್ತು
ದೇಶ ಮಟ್ಟದಲಿ
ಹೆಸರನು ಮಾಡಿದೆ
ಪರಿಷತ್ತು....||5||
ರಚನೆ: ಡಾ.ಗಣೇಶ್ ಗಂಗೊಳ್ಳಿ