Thursday, 23 October 2025

ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ

ಕನ್ನಡ ಜಾನಪದ ಪರಿಷತ್       

     ಪ್ರಸ್ತಾವನೆ         
               
                ಬುಡಕಟ್ಟು ಹಾಗೂ ನಾಡಿನ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಲು ,ಮತ್ತು ಎಲೆಮರಿಕಾಯಿರಂತಹ ಜನಪದ ಕಲಾವಿದರನ್ನು ಉಳಿಸಿ ಬೆಳೆಸಲು ಸ್ಥಾಪನೆಯಾದ ಸಂಸ್ಥೆಯೇ ಕನ್ನಡ ಜಾನಪದ ಪರಿಷತ್
 ಇದನ್ನು ಜಾನಪದ ಶ್ರೀ ಎಸ್ ಬಾಲಾಜಿ   ಹಾಗೂ ಶ್ರೀ ಟಿ ಕೆ ಗೌಡ ರವರು ಸ್ಥಾಪಿಸಿದರು. ಈ ಸಂಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ,ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ .ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಗಡಿನಾಡಿನಲ್ಲಿ,ಹೊರ ರಾಜ್ಯಗಳಲ್ಲಿ ತನ್ನ ಅಧ್ಯಾಯವನ್ನು ಹಾಗೂ ಘಟಕಗಳನ್ನು ಪ್ರಾರಂಭ ಮಾಡಿದೆ. 

 ಮೌಖಿಕ ಪರಂಪರೆ ಉಳಿವಿಗಾಗಿ ಆಡಿಯೋ ದಾಖಲಿಕರಣ, ಪ್ರದರ್ಶನ ಕಲೆಗಳು ಉಳಿಯುವುದಾಗಿ ವಿಡಿಯೋ ದಾಖಲಿಕರಣ
 ಪಾರಂಪರಿಕ ಜನಪದದ
 ಉಳಿವಿಗಾಗಿ  ಪುಸ್ತಕಗಳನ್ನು ಹೊರತರಲಾಗಿದೆ.




ಒಂದು ವರ್ಷದಲ್ಲಿ ಸುಮಾರು ೫೭೨ ಕಾರ್ಯ ಕ್ರಮಗಳನ್ನು ಆಯೋಜಿಸಿದೆ.  9 ವರ್ಷಗಳಲ್ಲಿ ಸುಮಾರು ಎಂಟು ಸಾವಿರ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ  ಜಿಲ್ಲೆಯ ತಾಲೂಕು ಹೋಬಳಿ ಹಾಗೂ ಗ್ರಾಮ ಘಟಕಗಳಲ್ಲಿ  ಯಾವುದೇ ಸರ್ಕಾರದ ಅನುದಾನವಿಲ್ಲದೆ  ಆಯೋಜಿಸಿ ಯಶಸ್ವಿ ಆಗಿರುತ್ತದೆ. 
                  
                    ಕನ್ನಡ ಜಾನಪದ ಪರಿಷತ್ತಿನ ಜಾನಪದ ಕಲೆಗಳ ತರಬೇತಿ ಸಂಸ್ಥೆಯಾಗಿ "ಜಾನಪದ ಪ್ರಪಂಚ"ವನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಾಳೇಕೆರೆ ಯಲ್ಲಿ ದಿನಾಂಕ 06/03/2015 ರಂದು ಶಂಕು ಸ್ಥಾಪನೆ ಮೂಲಕ  ಪದಾದಿಕಾರಿಗಳಿಂದ ಉದ್ಘಾಟನೆಯಾಗಿ ಜನ್ಮ ತಾಳಿದೆ. ಈ ಸಂಸ್ಥೆಯ ಉದ್ದೇಶ ಜಾನಪದ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವುದಾಗಿದೆ . 

  ಉದ್ದೇಶಗಳು
  1. ಜಾನಪದ ದಾಖಲೀಕರಣ
  2.  ತರಬೇತಿ
  3. ಕ್ಷೇತ್ರ ಕಾರ್ಯ

 ಘಟಕಗಳು
 ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲಾ ಘಟಕಗಳು, 178 ತಾಲೂಕು ಘಟಕಗಳು, 63 ಹೋಬಳಿ ಘಟಕಗಳು, 1123 ಗ್ರಾಮ ಘಟಕಗಳು, ಮಹಾರಾಷ್ಟ್ರ ಘಟಕ, ತಮಿಳುನಾಡು ಘಟಕ, ಈಗಾಗಲೇ ಯಶಸ್ವಿಯಾಗಿ ಉದ್ಘಾಟನೆಗೊಂಡಿರುತ್ತದೆ.

   ಜಾನಪದ ಪ್ರಪಂಚದಲ್ಲಿನ ಮುಂದಿನ ಚಟುವಟಿಕೆಗಳು:-

 1. ಚರ್ಮವಾದ್ಯ ತಯಾರಿಕಾ ಮತ್ತು ನಿತ್ಯ ಜಾನಪದ ಪ್ರದರ್ಶನ ಕಲೆಗಳ ತರಬೇತಿ ಕೇಂದ್ರ ಸ್ಥಾಪನೆ.
 2. ಮೌಖಿಕ ಪರಂಪರೆಯ ಉಳಿವಿಗಾಗಿ ಆಡಿಯೋ ವೀಡಿಯೋ ಸ್ಟೋಡಿಯೋ ಸ್ಥಾಪನೆ.
 3. ಜಾನಪದ ಗ್ರಂಥಾಲಯ ಸ್ಥಾಪನೆ.                              4. ಜಾನಪದ ಕಲಾವಿಧರಿಗಾಗಿ ವಿಮಾ ಯೋಜನೆ 
 5. ಶಾಲಾ ಕಾಲೇಜುಗಳಲ್ಲಿ ಕನ್ನಡ ಜಾನಪದ ಪರಿಷತ್ ಕೇಂದ್ರ ಸ್ಥಾಪನೆ.
 6. ಜಾನಪದ ಕಲಾವಿದರ ಸಮೀಕ್ಷೆ ಮತ್ತು ಜಿಲ್ಲಾವಾರು ಕೈಪಿಡಿ ಬಿಡುಗಡೆ.
                 
           ಕನ್ನಡ ಜಾನಪದ ಪರಿಷತ್ತಿನ ಯಶಸ್ವಿ      ಕಾರ್ಯಕ್ರಮಗಳು                      
          
💐 2015   - ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ, ದೊಡ್ಡಬಳ್ಳಾಪುರ.
💐 2015 - ಸಂಸ್ಥಾಪನಾ ದಿನಾಚರಣೆ ಹಾಗೂ ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ ಸಮಾರಂಭ, ಶಹಾಪುರ ಜವಾರ್ ನವೋದಯ ಶಾಲೆ ಯಾದಗಿರಿ ಜಿಲ್ಲೆ.
💐 2016 - ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆ ಹಾಗೂ ಜಲ ಜನೋಪದೋತ್ಸವ, ಗೋಕರ್ಣ ಕುಮಟ ತಾಲೂಕು, ಉತ್ತರ ಕನ್ನಡ ಜಿಲ್ಲೆ.
💐 2016 - ರಾಜ್ಯ ಮಟ್ಟದ ಒಗಟು ಸ್ಪರ್ಧೆ, ತರೀಕೇರೆ ತಾಲೂಕು, ಪಂಚಾಯಿತಿ ಸಭಾಂಗಣ, ಚಿಕ್ಕಮಗಳೂರು 
💐 2016 - ವಿಶ್ವ  ಜಾನಪದ ದಿನಾಚರಣೆ ಅಂಗವಾಗಿ ಕಲಾವಿದರ ಕಲರವ. 
💐 2016 - ರಾಜ್ಯ ಮಟ್ಟದ ಪ್ರಥಮ ಜೋಗಿ ಸಮ್ಮೇಳನ, ಆನಂದಪುರ,ಮುರುಗಮಠ, ಸಾಗರ ತಾಲೂಕು, ಶಿವಮೊಗ್ಗ 
💐2016- ರಾಷ್ಟ್ರ ಮಟ್ಟದ ಗಾಳಿಪಟ ಸ್ಪರ್ಧೆ, ಗುಂಡಪ್ಪ ಬಯಲು, ದೊಡ್ಡಬಳ್ಳಾಪುರ.
💐2016 - ವಿಶ್ವ ಪರಿಸರ ದಿನಾಚರಣೆ.
💐2016 - ವಿಶ್ವ ಜಾನಪದ ದಿನಾಚರಣೆ, ಕನಕಪುರ.
💐2016 - ಕನ್ನಡ ಜಾನಪದ ರಾಜ್ಯೋತ್ಸವ
💐2017 ರಾಜ್ಯ ಮಟ್ಟದ ಗೊರವರ ಸಮ್ಮೇಳನ, ಸಿಂಗಾಪುರ ಬೆಂಗಳೂರು
 ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ 2017 
* ರಾಜ್ಯಮಟ್ಟದ ಹೆಣ್ಣು ಮಕ್ಕಳ ಜಡೆ ಹೆಣಿಯುವ ಸ್ಪರ್ಧೆ 2017
* ರಾಜ್ಯಮಟ್ಟದಒಡಪು ಸ್ಪರ್ಧೆ ಗದಗ 2018
* ರಾಜ್ಯಮಟ್ಟದ ಗಾದೆ ಸ್ಪರ್ಧೆ ಹಾಸನ 2018
* ಜನಪದ ಪ್ರಪಂಚ ಪ್ರಶಸ್ತಿ ಪ್ರದಾನ 2018 
* ರಾಷ್ಟ್ರಮಟ್ಟದ ಗಾಳಿಪಟಸ್ಪರ್ಧ ದೊಡ್ಡಬಳ್ಳಾಪುರ 2019
* ಜಿ ಶಂಪಾ ಪ್ರಶಸ್ತಿ ಪ್ರಧಾನ 2019
* ಕಂಸಾಳೆ ಮಾದೇವಯ್ಯ ಪ್ರಶಸ್ತಿ ಪ್ರಧಾನ 2019
* ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ 2019 
* ಹಲಸಂಗಿ ಗೆಳೆಯರ ಮಧುರ ಚೆನ್ನ ಪ್ರಶಸ್ತಿ ಪ್ರಧಾನ 2020
* ಜಾಲತಾಣದಲ್ಲಿ  101
* ದಿನ ವಿಚಾರ ಸಂಕಿರಣಗಳನ್ನು ಕರೋನಾ  ಸಮಯದಲ್ಲಿ ಯಶಸ್ವಿಯಾಗಿ ಏರ್ಪಡಿಸಲಾಗಿತ್ತು.
* ಪ್ರಥಮ ಬಾರಿಗೆ ಆನ್ಲೈನಲ್ಲಿ  ರಾಷ್ಟ್ರೀಯ ಜಾನಪದ ಸಮ್ಮೇಳನವನ್ನು  ಆಯೋಜಿಸಿ  ಸತತವಾಗಿ 12 ಗಂಟೆಗಳ ಕಾಲ  ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ  ಜಾನಪದ ಅಭಿಮಾನಿಗಳು  ಸಮ್ಮೇಳನದಲ್ಲಿ ಭಾಗಿಯಾಗಿದ್ದರು, ಇದು ಒಂದು ದಾಖಲೆಯ ಕಾರ್ಯಕ್ರಮ 2021
* ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ 2020
*  ರಾಜ್ಯಮಟ್ಟದ ರಿವಾಯತ್ ಪದಗಳ ಉತ್ಸವ 2921
* ರಾಜ್ಯಮಟ್ಟದ ಹಂತಿ ಹಬ್ಬ  ವಿಜಯಪುರ ಜಿಲ್ಲೆ2021
* ಕೃಷ್ಣ ನದಿಗೆ ಬಾಗಿನ ಅರ್ಪಣೆ ವಿಜಯಪುರ ಜಿಲ್ಲೆ 2021
* ಕರೋನ ಕಾಲದಲ್ಲಿ ಬುಡಕಟ್ಟು ಹಾಗೂ ಅಲಮಾರಿ ಕಲಾವಿದರಿಗೆ  ಉಚಿತ ಆಹಾರಕಿಟ್ಟುಗಳನ್ನು ಸಾವಿರಾರು ಕಲಾವಿದರಿಗೆ  ವಿತರಿಸಲಾಯಿತು  2021.
* ದಾವಣಗೆರೆ ಜಿಲ್ಲೆಯಲ್ಲಿ
* ರಾಜ್ಯಮಟ್ಟದ ಜನಪದ ಗೀತೆ  ಸ್ಪರ್ಧೆಯಲ್ಲಿ ಸುಮಾರು ಸಾವಿರ ಕಲಾವಿದರ ಬಾಗಿಯಾಗಿ ಯಶಸ್ವಿ 2021
* ಕೋಲಾರ ಜಿಲ್ಲೆಯಲ್ಲಿ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ 2022
* ರಾಯಚೂರಿನಲ್ಲಿ ಪ್ರಥಮ ಜಾನಪದ ಸಮ್ಮೇಳನ  2022
* ತುಮಕೂರು ಜಿಲ್ಲೆಯ ಶಿರಾ ತಾಲೂಕಿನ  ಬರಗೂರಿನಲ್ಲಿ  ಪ್ರಥಮ ಗಡಿನಾಡು ಜಾನಪದ ಸಮ್ಮೇಳನ 2022
* ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ 2022
* ಇಂಡಿ ತಾಲೂಕು ಪ್ರಥಮ ಜಾನಪದ ಸಮ್ಮೇಳನ 2022
* ಮೈಸೂರು ಜಿಲ್ಲೆಯಲ್ಲಿ ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ ಸಮಾರಂಭ 2022
* ಹಾವೇರಿ ಜಿಲ್ಲೆಯ  ಗೊಟಗೋಡಿ  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ವಿಚಾರ ಸಂಕಿರಣ 2022
* ಬಾಗಲಕೋಟೆ ತಾಲೂಕು ಪ್ರಥಮ ಜಾನಪದ ಸಮ್ಮೇಳನ  2023
* ಗುಳೇದಗುಡ್ಡ ತಾಲೂಕು ಪ್ರಥಮ ಜಾನಪದ ಸಮ್ಮೇಳನ 2023
* ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿ  ಉತ್ತರ ಕರ್ನಾಟಕ ಪ್ರಥಮ ಜಾನಪದ ಸಮ್ಮೇಳನ 2023
* ರಾಯಚೂರಿನಲ್ಲಿ ಪ್ರಥಮ  ಮಹಿಳಾ ಜಾನಪದ ಸಮ್ಮೇಳನ 2023
* ಉಡುಪಿ ಜಿಲ್ಲೆಯ ಬೈಂದೂರ್ ತಾಲೂಕಿನ  ಮರವಂತೆ ಸಮುದ್ರ ತೀರದಲ್ಲಿ  ದ್ವಿತೀಯ ಜಲ ಜಾನಪದೋತ್ಸವ  2023
* ಕೊಡಗು ಜಿಲ್ಲೆಯ ನಾಪೋಕಲಿನಲ್ಲಿ ಬೆಳದಿಂಗಳ ಜಾನಪದ ಕಾರ್ಯಕ್ರಮ
* ಬಾಗಲಕೋಟೆ ಜಿಲ್ಲೆಯ ಇಲ್ಕಲ್ ತಾಲ್ಲೂಕಿನ ಪ್ರಥಮ ಜಾನಪದ ಸಮ್ಮೇಳನ 2023
* ವಿಭಾಗ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕಲ್ಬುರ್ಗಿ ಜಿಲ್ಲೆಯಲ್ಲಿ ಪ್ರಧಾನ ಮಾಡಲಾಯಿತು.2023
* ಬೆಂಗಳೂರು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಘಟಕಗಳು, ಹಾಗೂ ವಾರ್ಡ್ ಘಟಕಗಳನ್ನು  ಸಂಘಟಿಸಲಾಗುತ್ತಿದೆ.

      ಪ್ರಸ್ತುತ ಕಾರ್ಯ ಕ್ರಮಗಳು

೧, ವಿಕಾಸಕ್ಕಾಗಿ ಜಾನಪದ
೨,ನಮ್ಮ ನಡಿಗೆ ಜನಪದ ಕಡೆಗೆ
೩,ಮಠದಿಂದ ಮಠಕ್ಕೆ ಜಾನಪದ
೪,ಹಾಸ್ಟೆಲ್ ಯಿಂದ ಹಾಸ್ಟೆಲ್ ಗೆ ಜಾನಪದ
೫,ಜಾನಪದ ಕಲಾವಿದ ಸಮೀಕ್ಷೆ
೬,ಜಾನಪದ ಅಮಾವಾಸ್ಯೆ
೭,ಜಾತ್ರೆಯಾಗ ಜಾನಪದ
೮,ಜಾನಪದ ತೇರು
೯,ಮಹಿಳಾ ಜಾನಪದ ಸಮಾವೇಶ
೧೦,ಮಕ್ಕಳ ಜಾನಪದ ಸಮಾವೇಶ
೧೧,ರಾಷ್ಟ್ರೀಯ ವಿಚಾರ ಸಂರ್ಕೀಣ
೧೨,ಜಾನಪದ ಕಮ್ಮಟ 
೧೩,ಜಾನಪದ ಶ್ರಾವಣ
೧೫,ಜಾನಪದ ಕೃಷಿ.

 💐  ಜಾನಪದ ಪ್ರಪಂಚ ಪ್ರಶಸ್ತಿ ಸ್ಥಾಪನೆ
   
                 ೫0 ವರ್ಷ ಮೀರಿದ ಯಾವುದೇ ಪ್ರಶಸ್ತಿಗೆ ಭಾಜನರಾಗದೆ,ಎಲೆಮರಿಕಾಯಿರಂತಹ ,ಅಜ್ನಾತ ಜನಪದ ಕಲಾವಿದರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಜಾನಪದ ಪ್ರಪಂಚ ಪ್ರಶಸ್ತಿಯನ್ನು ನೀಡಲಾಗುತ್ತಿದೆ,ಪ್ರಸ್ತುತ ಪ್ರಶಸ್ತಿಯ ಮೊತ್ತ ೨೦೦೦ ರೂ 
ನಗದು,ಪ್ರಶಸ್ತಿ ಫಲಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತಿದೆ.

   💐 ಪ್ರದರ್ಶನ ಕಲೆಗಳ ತರಬೇತಿ;

              ಜಾನಪದ ಸಾಹಿತ್ಯ, ಸಂಸ್ಕೃತಿಯನ್ನು ಶಾಲಾ ಹಂತದಿಂದ ವಿಶ್ವ ವಿದ್ಯಾಲಯದ ಹಂತದವರೆಗೂ ಪ್ರದರ್ಶನ ಕಲೆಗಳ ಹಾಗೂ ಜನಪದ ಗೀತೆಗಳ ತರಬೇತಿ ಯನ್ನು ನಡೆಸಲಾಗುತ್ತದೆ,ಈಗಾಗಲೇ 668 ತರಬೇತಿ ಶಿಬಿರಗಳನ್ನು 10 ವರ್ಷದಲ್ಲಿ ನಡೆಸಲಾಗಿದೆ.

💐 ವಿಕಾಸಕ್ಕಾಗಿ ಜಾನಪದ;
    

       ಸರ್ಕಾರದ    ಸಾರ್ವಜನಿಕ ಶಿಕ್ಷಣ ಇಲಾಖ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ  ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ವಿಕಾಸಕ್ಕಾಗಿ ಜಾನಪದ ಕಾರ್ಯ ಕ್ರಮವನ್ನು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಯೋಜಿಸಬೇಕೆಂದು ಸುತ್ತೊಲೆ ಹೊರಡಿಸಿದ್ದಾರೆ .ಜಾನಪದ ನೃತ್ಯ, ಸಂಗೀತ ವನ್ನು ಶಾಲಾ ಕಾಲೇಜು ಹಂತದಲ್ಲಿ ಅಭಿವೃದ್ಧಿ ಪಡಿಸಬೇಕೆಂದಿದ್ದಾರೆ. ಜಾನಪದ ಕಲೆಗಳ ಕಲಿಕೆ, ಅರಿವು ಮೂಡಿಸುವುದು ಇದರ ಉದ್ದೇಶ, ಈಗಾಗಲೇ  750 ಕ್ಕಿಂತ ಹೆಚ್ಚು  ಶಾಲೆ ಕಾಲೇಜುಗಳಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ  ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಗಿದೆ.

   
         "ಜಾನಪದ ಮೂಲೆ ಗುಂಪಾದರೆ....,
                   ಮಾನವ ಜನಾಂಗವೇ ಮೂಕಾದಂತೆ"
      
                        -ಜಾನಪದ ,ಎಸ್, ಬಾಲಾಜಿ.
ಜನಪದರ ಕನಸುಗಳಿಗೆ
                 ಜೀವ ತುಂಬೊಣ... 
                            ಬನ್ನಿ, ಕೈ ಜೋಡಿಸಿ.j

Tuesday, 21 October 2025

JANAPADA S BALAJI

Dr. Janapada S Balaji is a renowned figure in Karnataka's cultural scene, serving as the State President of the Kannada Janapada Parishath. He's a strong advocate for folk art and culture, working tirelessly to promote and preserve Karnataka's rich folklore. Here are some key highlights about him¹ ² ³:
- *Founder of Kannada Janapada Parishath*: A center dedicated to Karnataka's folklore, featuring a museum of folk instruments and residency programs.
- *Folk Art Documentation*: He's documented over 250 diverse folk art forms and artists, building a vast network of over 730 active members across 31 districts and 170 taluks.
- *Advocacy for Folk Artists*: Dr. Balaji works to support and advocate for folk artists' rights, both at the grassroots level and in policy-making.
- *Awards and Recognition*: He's a recipient of the Nadoja Kempegowda National Award for his contributions to folk art and culture.
- *Government Roles*: Dr. Balaji serves as a member of the Indian Council for Cultural Relations (ICCR) and the NSS State Advisory Member, Government of Karnataka.

Dr. Balaji emphasizes the importance of incorporating folk prose and poetry in school and college curricula, believing it would benefit students. He also stresses the need for increased financial support for folk artists, suggesting a monthly pension hike to ₹5,000.⁴

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...