ಜನಿಸಿದರೂ ಸಿಲಿಕಾನ್ ಸಿಟಿ ಯಲ್ಲಿ,
ಜೀವಿಸುತ್ತಿರುವರು ಜಾನಪದ ಸಾಹಿತ್ಯದಲ್ಲಿ.
250 ಕ್ಕೂ ಹೆಚ್ಚು ಕಲಾಪ್ರತಿಭೆಗಳ ಆಶ್ರಯದಾತ.
ಕನ್ನಡ ಜಾನಪದ ಪರಿಷತ್ತಿನ ಸೃಷ್ಟಿಕರ್ತ.
ಶ್ರೀಮಂತ ಸಂಸ್ಕೃತಿಯ ಸಂರಕ್ಷಕ.
ಜಾನಪದ ವೃತ್ತಿಯ ಪ್ರೋತ್ಸಾಹಕ.
ರಾಷ್ಟ್ರದಾದ್ಯಂತ ರಂಗು ಚೆಲ್ಲಿದ ಛಲಗಾರ.
ಕಲಾವಿದರ ಕಲ್ಯಾಣಕ್ಕಾಗಿಯೇ ಕಟ್ಟಿದ ಜನಪದದ ಕುಟೀರ.
ಪ್ರಶಸ್ತಿಗಳ ಭಾರ ಹೊತ್ತ ಸರಳತೆಯ ಸೇವಕ,
ಆಧುನಿಕತೆಯ ಆಡಂಬರ ತೊರೆದ
ಜನಪ್ರಿಯ ನಾಯಕ.
ಅಂದು ದೇಶಕ್ಕಾಗಿ ಜೀವ ಕೊಟ್ಟರು S. ನೇತಾಜಿ.
ಇಂದು ಜನಪದದ ಜನರಿಗಾಗಿ ಜೀವವಾಗಿರುವರು ಡಾ ಜಾನಪದ ಎಸ್ ಬಾಲಾಜಿ'.
ರಚನೆ
ಕುಮಾರಿ ಅಂಕಿತಾ ರಾಮಗೌಡ ಪಾಟೀಲ್
ಬೇಗಾವಿ