Friday, 26 August 2022

ಕನ್ನಡ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ - ಬೆಳಗಾವಿ ಹಾಗೂ ಶ್ರೀ ಸಿದ್ದರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬುಡಕಟ್ಟು ಹಾಗೂ ವಿಶ್ವ ಜಾನಪದ ದಿನಾಚರಣೆ .ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಕರ್ನಾಟಕ ರಾಜ್ಯಧ್ಯಕ್ಷ ಡಾ ಎಸ್ ಬಾಲಾಜಿ ಉದ್ಘಾಟಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಪ್ರೊ ಚಳುವರಾಜು, ಪ್ರಾಂಶುಪಾಲರು ಡಾ ಸಿದ್ದರಾಮರೆಡ್ಡಿ, ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕರು ಪ್ರೊ ಕೌಜಲಗಿ, ಜಿಲ್ಲಾಧ್ಯಕ್ಷ ಶ್ರೀ ಮೋಹನ್ ಗುಂಡಾಳೂರು, ಪ್ರಧಾನ ಕಾರ್ಯದರ್ಶಿ ಶ್ರೀ ಆರ್ ಪಿ ಪಾಟೀಲ್, ರಾಮನಗರ ಪ್ರಧಾನ ಕಾರ್ಯದರ್ಶಿ ಶ್ರೀ ಕೆ ಸಿ ಕಾಂತಪ್ಪ, ಶ್ರೀ ಕಾಡಪ್ಪನವರ, ಉಪನ್ಯಾಸಕ ಪ್ರೊ ಎ ಕೆ ಪಾಟೀಲ್ ಇದ್ದರು.

ಕರ್ನಾಟಕ ಬುಡಕಟ್ಟು ಅಕಾಡೆಮಿಯನ್ನು ಸ್ಥಾಪಿಸ ಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಸರ್ಕಾರವನ್ನು ಒತ್ತಾಯಿಸಿದರು .ಕನ್ನಡ ಜಾನಪದ ಪರಿಷತ್ ಬೆಂಗಳೂರು ಬೆಳಗಾವಿ ಜಿಲ್ಲಾ ಘಟಕ ಹಾಗೂ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಆಶ್ರಯದಲ್ಲಿ ಏರ್ಪಡಿಸಿದ ವಿಶ್ವ ಜಾನಪದ ಹಾಗೂ  ಬುಡಕಟ್ಟು  ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಮೂಲ ಜನಪದ ಹಾಗೂ ಬುಡಕಟ್ಟು  ಕಲಾವಿದರ ಸಾಮಾಜಿಕ  ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿ ತರಬೇತಿ ಕ್ಷೇತ್ರಕಾರ್ಯ, ದಾಖಲಿಕರಣದ ಬಗ್ಗೆ ಗಮನ ಹರಿಸಬೇಕೆಂದು
ಹಾಗೂ ತಿಳಿಸಿದರು. ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಪ್ರೊ ಚೆಲುವರಾಜು ಮಾತನಾಡಿ
 ಕರ್ನಾಟಕದ ಬುಡಕಟ್ಟು ಅಭಿವೃದ್ಧಿಗೆ  ಸರ್ಕಾರ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು. ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕರಾದ ಪ್ರೊ ಕೌಜಲಗಿ ಮಾತನಾಡಿ ಯುವ ಜನರು ಜನಪದ ಕುರಿತು ಅಧ್ಯಯನ ಮಾಡಬೇಕೆಂದು ತಿಳಿಸಿದರು.  ಪ್ರಾಂಶುಪಾಲರು ಡಾ ಸಿದ್ದರಾಮರೆಡ್ಡಿ, ಕನ್ನಡ ಜಾನಪದ ಪರಿಷತ್ತಿನ  ಜಿಲ್ಲಾಧ್ಯಕ್ಷ ಶ್ರೀ ಮೋಹನ್ ಗುಂಡಾಳೂರು, ಪ್ರಧಾನ ಕಾರ್ಯದರ್ಶಿ ಶ್ರೀ ಆರ್ ಪಿ ಪಾಟೀಲ್, ರಾಮನಗರ ಪ್ರಧಾನ ಕಾರ್ಯದರ್ಶಿ ಶ್ರೀ ಕೆ ಸಿ ಕಾಂತಪ್ಪ, ಶ್ರೀ ಕಾಡಪ್ಪನವರ, ಉಪನ್ಯಾಸಕ ಪ್ರೊ ಎ ಕೆ ಪಾಟೀಲ್ ಇದ್ದರು.

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...