Thursday, 18 June 2020

ಕನ್ನಡ ಜಾನಪದ ಪರಿಷತ್ ಉದ್ದೇಶಗಳು

*ಕನ್ನಡ ಜಾನಪದ ಪರಿಷತ್,ಬೆಂಗಳೂರು*

ಆತ್ಮೀಯರೇ,

ಜಾನಪದ ಸಾಮುದಾಯಿಕ ಕಲೆ.ಅದರೆ ಇಂದು ನಮ್ಮಮಧ್ಯೆ ಒಂದು ಕೃತಕ ಅಂತರ ಅನಿವಾರ್ಯವಾಗಿ ಸೃಷ್ಟಿಯಾಗಿದೆ.ಕಾರಣ ಎಲ್ಲರಿಗೂ ತಿಳಿದಿದೆ.ಇಂದಿನ ಈ ವಿಕೋಪದ ಪರಿಸ್ಥಿತಿಯಿಂದಾಗಿ ಎಲ್ಲ ರೀತಿಯ ಕಾರ್ಮಿಕರು, ದಿನಗೂಲಿ ನೌಕರರು, ಅಸಂಘಟಿತ ಸಿಬ್ಬಂದಿ ವರ್ಗದವರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಜಾನಪದ ಕಲಾವಿದರ ವಲಯದಲ್ಲೂ ತಲ್ಲಣ ಉಂಟಾಗಿದೆ.
 
*ಏಪ್ರಿಲ್ ,ಮೇ ತಿಂಗಳೆಂದರೆ ಮಕ್ಕಳ ಜನಪದ  ತರಬೇತಿ ಶಿಬಿರಗಳು, ಜನಪದ ಕಾರ್ಯಾಗಾರಗಳು ಗರಿಗೆದರಿ ನಾಡಿನ ನೂರಾರು ಜಾನಪದ ತಜ್ಞ ರಿಗೆ ,ಕಲಾವಿದರಿಗೆ ಕೆಲಸ ಸಿಕ್ಕುತ್ತಿತ್ತು.ಈ ಬಾರಿ ಅದಕ್ಕೂ ಸಂಚಕಾರ ಬಂದಿದೆ.*
*ಜಾನಪದ ಕಲೆಯಲ್ಲಿ ,ಅಲೆಮಾರಿ, ಬುಡಕಟ್ಟು ಗೊಂಬೆಯಾಟ, ಕಲಾವಿದರು ಪೂರ್ಣಾವಧಿ ತೊಡಗಿಕೊಂಡು* ಬದುಕು ನಿರ್ವಹಿಸುವ ಕುಟುಂಬದವರೂ ಇದ್ದಾರೆ.
ಇಂದಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಜಾನಪದ ಹೇಗೆ ಅವರ ಸಹಾಯಕ್ಕೆ ನಿಲ್ಲಬಹುದು,ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವ ರೀತಿ ಒಟ್ಟಾರೆ ಜಾನಪದ ಕಲಾವಿದರ ನೆರವಿಗೆ ಬರಬಹುದು ಎಂದು ಆಲೋಚಿಸುವಾಗ,  ಕಲಾವಿದರಿಗೆ ಒಂದು ವಿಶೇಷ ಆರ್ಥಿಕ ಪರಿಹಾರಕ್ಕಾಗಿ ಸಂಬಂಧಪಟ್ಟವರನ್ನು ಮನ ಒಲಿಸಿ ಒಂದು ಆದೇಶ
ಬರುವಂತೆ ಮಾಡಬೇಕಾದ ಅವಶ್ಯಕತೆ ಇದೆ. 

ಇದರೊಟ್ಟಿಗೆ, ಈ ಕೆಳಗಿನ ಕೆಲವು ಅಂಶಗಳೂ , ಸಧ್ಯದ ಪರಿಸ್ಥಿತಿಯಲ್ಲಿ
ಸರ್ಕಾರದ ಆದೇಶ ಬರುವ ನಿಟ್ಟಿನಲ್ಲಿ ಮುಖ್ಯವಾದ ಅಂಶಗಳಾಗುತ್ತವೆ. 

೧.ಕರ್ನಾಟಕದ ಎಲ್ಲಾ ಜನಪದ ಕಲಿಕಾ ಶಾಲೆಗಳು ಈ ವಿಷಯದಲ್ಲಿ ಸಕ್ರಿಯವಾಗಿ ಕಲಾವಿದರ ಪರವಾಗಿ ಸಂಬಂಧಪಟ್ಡವರನ್ನು ಒತ್ತಾಯಿಸುವುದು.

೨.ವರ್ತಮಾನದಲ್ಲಿ ಆಧುನಿಕ ಜಾನಪದ ಸಂಚಾರಿ  ಘಟಕಗಳು ಕೆಲಸಮಾಡುತ್ತಿದ್ದು ಈ ಕಲಾವಿದರಿಗೂ ಸೂಕ್ತ ನೆರವು ಅಗತ್ಯವಿದೆ.

೩.ಜಾನಪದ ಕಲೆಯ ಮೂಲಕ ತಮ್ಮ ಪ್ರತಿಭೆ,ಪರಿಶ್ರಮದ ಮೂಲಕ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು
ಒತ್ತಾಸೆಯಾಗಿ ನಿಲ್ಲಬೇಕು.

ರಾಜ್ಯ ಸರ್ಕಾರ ಅಸಂಘಟಿತ ವಲಯದ ಹಾಗೂ ಇನ್ನಿತರೇ ಕಾರ್ಮಿಕ ವರ್ಗದವರಿಗೆ ಸಹಾಯ ಧನ, ಘೋಷಿಸಿರುವಾಗ ಅದು ಜಾನಪದವನ್ನು ಮರೆತಂತಿದೆ. ಬಹಳ ಮುಖ್ಯವಾಗಿ ಜಾನಪದ ಕಲೆಯನ್ನುಆಧರಿಸಿ ಬದುಕು ನಿರ್ವಹಿಸುತ್ತಿರುವ ಎಲ್ಲ ಪ್ರಕಾರಗಳ ಕಲಾವಿದರಿಗೆ, ತಂತ್ರಜ್ಞರಿಗೆ ಆರ್ಥಿಕ
ಸಹಾಯದ ಅವಶ್ಯಕತೆ ಇದೆ.

ಸರ್ಕಾರದ ಆದೇಶ ಬರುವ ನಿಟ್ಟಿನಲ್ಲಿ ಸಂಬಂಧಪಟ್ಟ 
ಇಲಾಖೆಯ ಮಂತ್ರಿಗಳ ಜವಾಬ್ದಾರಿಯೂ ಇದೆ. ಹೀಗಾಗಿ ಸಂಸ್ಕೃತಿ ಸಚಿವರಿಗೆ ವಿವರಿಸಿ, ಅವರ
ಮುಖಾಂತರ ಮುಖ್ಯಮಂತ್ರಿಗಳ ಅಂಗೀಕಾರ ಪಡೆಯಬೇಕು;

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...